ಕೌದಿ
ಚಿಂದಿ ಬಟ್ಟೆ ತುಕುಡಿ ಜೋಡಿಸಿ ಹೊಲಿದ
ಈ ಹೊದಿಕೆ ಹೊದ್ದು ಮಲಗಿದಾಗಲೆಲ್ಲ
ಹಳತುಗೊಂಡ ಕನಸುಗಳೆಲ್ಲ
ಚಿಂದಿ ಬಟ್ಟೆ ತುಕುಡಿ ಜೋಡಿಸಿ ಹೊಲಿದ
ಈ ಹೊದಿಕೆ ಹೊದ್ದು ಮಲಗಿದಾಗಲೆಲ್ಲ
ಹಳತುಗೊಂಡ ಕನಸುಗಳೆಲ್ಲ
ಮತ್ತೆ ಮೈ ಮುರಿದು ಎದ್ದು ನಿಲ್ಲುತ್ತವೆ.
ಕಳೆದು ಹೋದ ಕನಸುಗಳೆಲ್ಲ
ಮತ್ತೆ ಗರಿ ಬಿಚ್ಚಿ ಕುಣಿಯುತ್ತವೆ.
ಕೌದಿ ಮೇಲಿನ ತುಣುಕು ಬಟ್ಟೆ ತೋರಿಸಿ
ಅಮ್ಮ ಹೇಳುತ್ತಿದ್ದುದು ನೆನಪಾಯಿತು.
ಕಂದಾ,ನೀನು ಹುಟ್ಟಿದಾಗ ನಿನ್ನ ಮಲಗಿಸಿದ್ದು
ಇದೇ ನನ್ನ ಮಾಸಿ ಹೋದ ಸೀರೆಯಲ್ಲಿ.
ನೀ ಉಚ್ಚೆ ಮಾಡಿದ್ದು ,ಮಲ ವಿಸರ್ಜಿಸಿದ್ದು
ಇದೇ ಹರಿದು ಹೋದ ಬಟ್ಟೆಯಲ್ಲಿ.
ಇಲ್ಲಿದೆಯಲ್ಲ,ಇದು ನಿನ್ನ ಅಕ್ಕನ ಕುಪ್ಪಸ.
ಅವಳ ಹೆಗಲ ಮೇಲೆ ಅತ್ತು ನಿದ್ದೆ ಹೋಗಿ
ನೀ ಸುರಿಸಿದ ಜೊಲ್ಲು,ಹಠ ಮಾಡಿ ಗೀರಿದ
ಉಗುರ ಗುರುತು,ಇನ್ನೂ ಉಳಿದಂತಿದೆ.
ಇದೋ ನೋಡು,ನಿನ್ನಪ್ಪನ ಅಂಗಿ ಮೇಲೆ
ನಿನ್ನ ಕಣ್ಣ ನೀರ ಹಸಿ,ಇನ್ನೂ ಆರದಂತಿದೆ.
ಇಲ್ಲಿ ನೋಡು,ಇದು ನಿನ್ನಜ್ಜಿಯ ಸೀರೆ.
ನಿನ್ನಪ್ಪ ಬದುಕಿದ್ದಾಗ,ಹೊದಿಕೆಯಾಗಿದ್ದು,
ಸತ್ತಾಗ ಮಸಣಕೊಯ್ಯುವ ಸಿದಿಗೆಯಾಗಿದ್ದು
ಇದೇ ಹರಿದು ಹೋದ ಚಿಂದಿ ಸೀರೆ ಕಣೋ
ಇದು ಕೇವಲ ಕೌದಿಯಲ್ಲ ಕಂದಾ..
ನಿನ್ನ ಹುಟ್ಟು ಸಾವಿನ ನಡುವ ನೆನಪ
ಗಟ್ಟಿಯಾಗಿಡುವ ಅಪರೂಪದ ನೇಯ್ಗೆ
-ಗುರುನಾಥ ಬೋರಗಿ
ಕಳೆದು ಹೋದ ಕನಸುಗಳೆಲ್ಲ
ಮತ್ತೆ ಗರಿ ಬಿಚ್ಚಿ ಕುಣಿಯುತ್ತವೆ.
ಕೌದಿ ಮೇಲಿನ ತುಣುಕು ಬಟ್ಟೆ ತೋರಿಸಿ
ಅಮ್ಮ ಹೇಳುತ್ತಿದ್ದುದು ನೆನಪಾಯಿತು.
ಕಂದಾ,ನೀನು ಹುಟ್ಟಿದಾಗ ನಿನ್ನ ಮಲಗಿಸಿದ್ದು
ಇದೇ ನನ್ನ ಮಾಸಿ ಹೋದ ಸೀರೆಯಲ್ಲಿ.
ನೀ ಉಚ್ಚೆ ಮಾಡಿದ್ದು ,ಮಲ ವಿಸರ್ಜಿಸಿದ್ದು
ಇದೇ ಹರಿದು ಹೋದ ಬಟ್ಟೆಯಲ್ಲಿ.
ಇಲ್ಲಿದೆಯಲ್ಲ,ಇದು ನಿನ್ನ ಅಕ್ಕನ ಕುಪ್ಪಸ.
ಅವಳ ಹೆಗಲ ಮೇಲೆ ಅತ್ತು ನಿದ್ದೆ ಹೋಗಿ
ನೀ ಸುರಿಸಿದ ಜೊಲ್ಲು,ಹಠ ಮಾಡಿ ಗೀರಿದ
ಉಗುರ ಗುರುತು,ಇನ್ನೂ ಉಳಿದಂತಿದೆ.
ಇದೋ ನೋಡು,ನಿನ್ನಪ್ಪನ ಅಂಗಿ ಮೇಲೆ
ನಿನ್ನ ಕಣ್ಣ ನೀರ ಹಸಿ,ಇನ್ನೂ ಆರದಂತಿದೆ.
ಇಲ್ಲಿ ನೋಡು,ಇದು ನಿನ್ನಜ್ಜಿಯ ಸೀರೆ.
ನಿನ್ನಪ್ಪ ಬದುಕಿದ್ದಾಗ,ಹೊದಿಕೆಯಾಗಿದ್ದು,
ಸತ್ತಾಗ ಮಸಣಕೊಯ್ಯುವ ಸಿದಿಗೆಯಾಗಿದ್ದು
ಇದೇ ಹರಿದು ಹೋದ ಚಿಂದಿ ಸೀರೆ ಕಣೋ
ಇದು ಕೇವಲ ಕೌದಿಯಲ್ಲ ಕಂದಾ..
ನಿನ್ನ ಹುಟ್ಟು ಸಾವಿನ ನಡುವ ನೆನಪ
ಗಟ್ಟಿಯಾಗಿಡುವ ಅಪರೂಪದ ನೇಯ್ಗೆ
-ಗುರುನಾಥ ಬೋರಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ