, ಕ(ಸ)ಣ್ಣ ಹನಿಗಳು
**************
ಅಮ್ಮನ ಶವವ ಅವಚಿಕೊಂಡು
ಕಂಬನಿಗರೆಯುತ್ತಿದ್ದಾಗ,
ಕಣ್ಣ ಹನಿ ನೆಲಕಿಳಿಯದಂತೆ
ಅಡ್ಡವಾಗಿದ್ದು; ಅವಳ ಅಂಗೈ
*******
ಬೆಟ್ಟದ ಕೆನ್ನೆಗೆ ಮೇಘ ಚುಂಬಿಸಲು
ಭೂಮಿ ತುಂಬಾ ಮಳೆಯೋ..ಮಳೆ.
ನನ್ನ ಪ್ರೇಮಿಸಿ ನೀ ಇನ್ನೊಬ್ಬನ ಚುಂಬಿಸೆ,
ಕಣ್ಣ ತುಂಬಾ ಹೊಳೆಯೋ..ಹೊಳೆ.
******
ಹೆತ್ತವರನ್ನು ಕಳೆದುಕೊಂಡ
ನಾನೀಗ, ಅಕ್ಷರಶಃ ತಬ್ಬಲಿ
ಅತ್ತು ಹಗುರಾಗುವುದಕೆ
ನಾನೀಗ,ಯಾರನು ತಬ್ಬಲಿ?
*******
'ವಂಚನೆ ' ಪದಕೆ ಅರ್ಥ ಹುಡುಕಿ
ಸುಸ್ತಾಗಿದ್ದೆ ಅಂದು ನಾನು
'ನಾನಿದ್ದೇನೆ' ಅಂತ ಸಮಾಧಾನಿಸಿ
ಯಾಮಾರಿಸಿದೆ ನೀನು
-ಗುರುನಾಥ ಬೋರಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ