'ತೀರ'ದ ರೋದನ
*******************
ನೂರು ಅಲೆಗಳ ಸೂರು ಕಟ್ಟಿದ
ನೀರ ಹನಿಗಳ ಧಾರೆ ಸುರಿಸಿದ /
ಒಡಲಬಂಧು ತೊರೆದು ಹೋದ ದೂರ
ಕಡಲಿಗಾಗಿ ಕಾದಿದೆ ಇಲ್ಲಿ ತೀರ //ಪ//
ಹುಚ್ಚು ಹಿಡಿದ ಹಾಗೆ ಹಂಬಲಿಸಿದೆ ಕಡಲು
ಮುಚ್ಚಿ ಹೋಯಿತು ದನಿ ಅಲೆ ಅಪ್ಪಳಿಸಲು /
ಕಡಲಿಗೂ ಬೇಕು ತೀರದ ನಂಟು
ಒಡಲಿನ ಬೇಗುದಿ ತಿಳಿಯುವುದೆಂತು //೧//
ಕಡಲು ತೀರದ ಪ್ರೇಮ ಕೃಷ್ಣ ರಾಧೆಯ ಹಾಗೆ
ಒಡೆಯನಗಲಿ ರಾಧೆ,ಬದುಕುವಳು ಹೇಗೆ /
ಶ್ಯಾಮನಿಗೆ ರಾಧೆ,ರಾಧೆಗೆ ಶ್ಯಾಮ
ಭೂಮಿಗೂ ಬಾನಿಗೆ ಇರುವಂತೆ ಪ್ರೇಮ //೨//
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ